Tambittu/ತಂಬಿಟ್ಟು for Shivarathri

ತಂಬಿಟ್ಟು ಉಂಡೆ
ಕನ್ನಡಕ್ಕೆ ಅನುವಾದ : ಲಕ್ಷ್ಮಿ Scroll down for English Version


ಶಿವರಾತ್ರಿ ಮತ್ತು ತಂಬಿಟ್ಟು ಇವೆರಡಕ್ಕು ಹೇಗೆ ನಂಟು ಅಂತ ಮಾತ್ರ ಕೇಳಬೇಡಿ ಯಾಕೆಂದ್ರೆ ಅದು ನಂಗೆ ಗೊತ್ತಿಲ್ಲ :D
ಸೌಮ್ಯ ಮಾಡುವ ವಿಧಾನ ಕೊಟ್ರು ನಾವು ಮಾಡಿ ಶಿವಾರ್ಪಣಂ ಅಂದುಕೊಂಡು ತಿಂದ್ವಿ

ಬೇಕಾಗುವ ಪದಾರ್ಥ :
ಅಕ್ಕಿ : 1 ಬಟ್ಟಲು
ಹುರ್ಗಡ್ಲೆ : 1 ಬಟ್ಟಲು
ನೆಲಗಡಲೆ/ಶೇಂಗ : 1/2 ಬಟ್ಟಲು (ಹುರಿದು ಕೊಳ್ಳಿ)
ಬೆಲ್ಲ : 1 and 1/2 ಬಟ್ಟಲು
ಎಳ್ಳು : 1/4 ಬಟ್ಟಲು
ಒಣ ಕೊಬ್ಬರಿ: 1/2 ಬಟ್ಟಲು (ತುರಿದ ಒಣ ಕೊಬ್ಬರಿ)
ಗೋಡಂಬಿ : 2 ಚಹಾದ ಚಮಚ/ಸಣ್ಣ ಚಮಚ (teaspoon)
ಗಸಗಸೆ : 2 ಚಹಾದ ಚಮಚ/ಸಣ್ಣ ಚಮಚ (teaspoon)
ಏಲಕ್ಕಿ ಪುಡಿ : 1 ಚಹಾದ ಚಮಚ/ಸಣ್ಣ ಚಮಚ (teaspoon)

Photobucket

ಮಾಡುವ ವಿಧಾನ :
೧. ಅಕ್ಕಿಯನ್ನು ಕೆಂಪಗಾಗುವ ತನಕ ಹುರಿದು ಕೊಳ್ಳಿ ನಂತರ ಅದನ್ನು ತಣ್ಣಗಾಗಲು ಬಿಡಿ
೨.ಹುರಿದ ಅಕ್ಕಿ , ಹುರ್ಗಡ್ಲೆ ಇವೆರಡನ್ನು ಪುಡಿ ಮಾಡಿಕೊಳ್ಳಿ
೩.ಹುರಿದು ಸಿಪ್ಪೆ ತೆಗೆದ ಶೇಂಗ, ಗಸಗಸೆ, ಗೋಡಂಬಿ, ಎಳ್ಳು ತುರಿದ ಒಣ ಕೊಬ್ಬರಿ ಈ ಎಲ್ಲವನ್ನು ಅಕ್ಕಿ ಹುರ್ಗಡ್ಲೆ ಪುಡಿ ಯೊಂದಿಗೆ ಮಿಶ್ರ ಮಾಡಿ.
೪.ಒಂದು ಪಾತ್ರೆಯಲ್ಲಿ ಬೆಲ್ಲ ತೆಗೆದುಕೊಳ್ಳಿ ಅದಕ್ಕೆ ೧ ಬಟ್ಟಲು ನೀರು ಹಾಕಿ ಅದನ್ನು ಸಣ್ಣ ಉರಿಯ ಮೇಲೆ ಕರಗಿಸಿಕೊಳ್ಳಿ. ಈ ೫.ಬೆಲ್ಲದ ನೀರನ್ನು ೪ ನಿಮಿಷ ಕುಡಿಯಲು ಬಿಡಿ. ಗಮನಿಸಿ : ಬೆಲ್ಲ ಪಾಕ ಬರಬಾರದು.
೬.ಈ ಬೆಲ್ಲದ ಬಿಸಿ ನೀರನ್ನು ಅಕ್ಕಿ ಹುರ್ಗಡ್ಲೆ ಪುಡಿಗೆ ಸೇರಿಸಿ ಕಲಿಸಿ. ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ನಂತರ ಉಂಡೆ ಕಟ್ಟಿ ಹೊಟ್ಟೆಗೆ ನೈವೇದ್ಯ ಮಾಡೋದು :)

__________________________________________________________________________________
Tambittu /Rice Flour and Jaggery Laddo


You need the following for making Tambittu :
Rice : 1 cup
Roasted Chickpeas/hurgadle/ : 1 cup
Peanuts - 1/2 cup (roasted and deskinned)
Cashew nuts: 2 tsp (roasted/fried in ghee )
Poppy seeds : 1 tsp
Sesame seeds : 1/4 tsp (white)
Dry Coconut : 1 cup (grated)
Jaggery : 1 and 1/2 cup (palm sugar-probable alternative)

Method :
Roast rice on a hot pan till it turns golden. Let it cool down. Powder it with roasted chickpeas.
Mix all the ingredients except jaggery with the rice and chickpea powder
Dissolve jaggery with 1 cup of water. You can choose to filter it if you notice dirt etc.,
Bring jaggery water to boil and let it boil for 4 -5 mins.
Note: we do not need any stringed syrup for Tambittu. Just thick jaggery syrup is enough
Mix this jaggery syrup with the rice and chickpea powder. let it cool down. When the dough is manageable make equal sized rounds/laddo out of it. Enjoy when it is warm.

Photobucket


Post a Comment