ಸ್ವಗತ - ಹವ್ಯಾಸ /Random thoughts - Hobby

scroll down for English version........ :D

ಸಣ್ಣವಳಿದ್ದಾಗ ಅಮ್ಮ ಹೇಳಿದ್ದ ಮಾತು... "ಒಳ್ಳೆ ಹವ್ಯಾಸ ಬೆಳೆಸ್ಕೊಬೇಕು ಮಗು, ಅದು ನಮ್ಮ ಆತ್ಮೀಯ ಗೆಳತಿ ಇದ್ದ ಹಾಗೆ ಜೀವನದಲ್ಲಿ ..." ಅದು ಆವಾಗ ಅರ್ಥ ಆಗಿರಲಿಲ್ಲ ಬಿಡಿ....ಈವಾಗ ನನ್ನ ಮಗಿನಿಗೆ ಒಂದು ಒಳ್ಳೆ ಹವ್ಯಾಸ ಅದೂ ಅವನು ಇಷ್ಟ ಪಟ್ಟು ಆಸಕ್ತಿ ತೋರಿಸಿ ಕಲಿಯ ಬೇಕು ಅಂತೆಲ್ಲ ಯಾವಾಗಲು ಮಂಡಿಗೆ ಹಾಕ್ತಾ ಇರ್ತಿನಿ.

ಉಮ್ಮ್..ಇನ್ನು ಏತಕ್ಕಾಗಿ ಹವ್ಯಾಸ ? ಹೌದಪ್ಪ ಜೀವನದಲ್ಲಿ ಹಲವು ಹಂತಗಳು ..ಪ್ರೈಮರಿ ಸ್ಕೂಲ್ನಲ್ಲಿ ಇದ್ದಾಗ ಆಟ ಪಾಠ ಅಂತ ಏನು ಚಿಂತೆ ಇರೋಲ್ಲ ಬಿಡಿ, ಹೈ ಸ್ಕೂಲ್ಗೆ ಬರ್ತಾ ಇದ್ದಂಗೆ..ಶುರು .. ಹತ್ತನೇ ತರಗತಿ ಒಳ್ಳೆ ಅಂಕಿಯಲ್ಲಿ ಪಾಸ್ ಮಾಡ್ಕೊಬೇಕು ಅಂತ ಶುರುನಪ್ಪ ..ದಿನ ಬೆಳಗಾದ್ರೆ ಮನೆ ಪಾಠ, ಸ್ಕೂಲು ಅಂತ ಹೇಳಿ ಹನ್ನೆರಡು ತಲೆನೋವು..ಆಮೇಲೆ ಪಿ ಉ ಸಿ ಓಹೋ..ವಿಷಯ ಇಲ್ಲಿಗೆ ಮುಗಿದು ಹೋಗಲಿಲ್ಲ ..ನಂತರದ ವಿದ್ಯಾಭ್ಯಾಸ, ಕೆಲಸ, ಮಾಡುವೆ, ಮುಂಜಿ, ಮಕ್ಕಳು ಹೀಗೆ ಅರ್ಧ ಅಯ್ಯಸ್ಸು ಮುಗಿದ ಮೇಲೆ .... ತಕ್ಷಣ ಅರಿವು ಮೂಡಿ (ನನ್ನ ತರಹ ..) ಬರುತ್ತೆ ನೋಡಿ ..ಹವ್ಯಾಸದ ಆಲೋಚನೆ ..

..ಅಂದಹಾಗೆ ಈವತ್ತು ಪಾಪುಗೆ ಏನು ಇಷ್ಟ ಅದನ್ನೇ ಮಾಡ್ತೀನಿ ಹೇಳು ಕಂದ ಅಂತ ಮುದ್ದಾಗಿ ಕೇಳಿ ಅವ ಕೇಳಿದ್ದನ್ನು ಮಾಡಿ ಕೊಟ್ಟಾಗ, ಅದನ್ನು ಅವನು ಆಸೆ ಇಂದ ತಿಂದಾಗ ಎಷ್ಟು ಆನಂದವೋ..ಯಾವತ್ತಾದರೂ ನನ್ನ ಕೂರಿಸಿ ಮಗ ಅಥವಾ ಗಂಡ ಹೀಗೆ ಮಾಡ್ತಾರ? ಅನ್ನುವ ಪ್ರಶ್ನೆ ಇಲ್ಲಿವರೆಗೂ ಬಂದಿಲ್ಲ ಬಿಡಿ. ಎಲ್ಲರ ಆರೈಕೆ, ಆಸೆ ಪೂರೈಸುತ್ತಾ ಕೆಲವೊಮ್ಮೆ ನನ್ನೇ ನಾನು ಕೇಳಿ ಕೊಂಡಿದ್ದು ಉಂಟು..ನಂಗೆ ಇಷ್ಟವಾದದ್ದು ಏನಿತ್ತು ನಾನು ಸಣ್ಣವಳಿದ್ದಾಗ ಅಂತ ...ತಿನ್ನೋದಲ್ಲ ಬಿಡಿ ಎಹೆಹೆ..

..ಹೂ...ನಾನು ತುಂಬಾ ಚೆನ್ನಾಗಿ ಹಾಡ್ತಾ ಇದ್ದೆ ಅಂತ ಅಪ್ಪ ನನ್ನ ಹತ್ರ ಅರ್ಧ ಡಜನ್ ಹಾಡು ಹೇಳಿಸುತ್ತ ಇದ್ರೂ ನೋಡಿ.. ಆ ಹವ್ಯಾಸ ಇದ್ದಕಿದ್ದ ಹಾಗೆ ಮಾಯವಾಗಿ ಹೋಗಿತ್ತು, ಇನ್ನು ಚಿತ್ರ ಕಲೆಯಲ್ಲಿ ಆಸಕ್ತಿ ಏನೋ ತುಂಬಾನೇ ಇತ್ತು ಆದ್ರೆ ಅವಕಾಶ ಸಿಗಲಿಲ್ಲ..ಅಲ್ಲಿ ಇಲ್ಲಿ ಗೆಳತಿಯರ ಹತ್ತಿರ ಕಲಿತು ಮಾಡಿದ ಪೇಂಟಿಂಗ್ ಶಿಥಿಲಾವಸ್ತೆಗೆ ಬಂದಿದ್ದರು ಅದನ್ನ ಮನೇಲಿ ಬಲವಂತದಿಂದ ನೇತು ಹಾಕಿದಿನಿ.. (ಅಮ್ಮನ ಮನೇಲಿ ರೀ..)..ಹೀಗೆ ಯೋಚನೆ ಮುಂದುವರೆಯಿತು ಬಿಡಿ ಸುಮಾರು ಹೊತ್ತು ..

ಈವಾಗ ಮಗ ಅವನ ಕೆಲಸ ಅವನು ಮಾಡಿ ಕೊಳ್ಳುತ್ತಾನೆ, ಇನ್ನು ಯಜಮಾನರು ಎರಡನೇ ಹೆಂಡತಿ ಮುಂದೆ (ಲ್ಯಾಪ್ ಟಾಪ್ ) ಮುಂದೆ ಕುಳಿತರೆ ಮೈಮರೆತು ಬಿಡುತ್ತಾರೆ, ನನ್ನ ಅಡಿಗೆ ಆದ ಮೇಲೆ ನಾನು ಏನು ಮಾಡ್ಲಿ ...? ಅಂದಾಗ ಅಮ್ಮ ಹೇಳಿದ ಮಾತು ಎಷ್ಟು ನಿಜ ಅನ್ನಿಸ್ತು ಬಿಡಿ...ಮತ್ತೆ ಹಾಡಲಿಕ್ಕೆ ಶುರು ಮಾಡಿದೆ "ಗಜವದನ ಬೇಡುವೆ ಗೌರಿ ತನಯ ..." ಒಳಗಿಂದ ಬಂತು ಧ್ವನಿ "ಯಾಕೆ ....ಮನಸ್ಸು ಸರಿ ಇಲ್ವೆ ? ಆಕಡೆ ಇಂದ ನಮ್ಮ ಆಂಗ್ಲ ಭಾಷೆ ಮಗ "ವೈ ಅರೆ ಯೌ ಸಿಂಗಿಂಗ್ ? ಎಹ್?
ನೋಡಿ ಹವ್ಯಾಸ ಅನ್ನೋ ಗೆಳತಿಯನ್ನ ಮರತ್ತಿದಕ್ಕೆ .......


I was always told by mother to nurture a good hobby for life. She felt that hobby is man's best friend. I did not realize the importance of it not till now, when I am struggling hard to think about a hobby for my son. Something which he loves to do and learns with 100% dedication and continues to do it through out his life. One question did pass through my mind .....hobby? why?

While I started thinking about my past, my hobby few things un wound ..care free school days, memories of which make me feel happy, tension filled and fun filled college days, responsible working women, a wife and a mother..uffff I have sailed a long way. Life has been busy soo very busy that this word called "HOBBY" was lost. There was no answer to the question "Why??"

Now that my son has grown up, a husband who is busy with his work schedule, I sometimes ask myself "what did I ever do to keep myself busy in life"? Many answers peeped in ..suddenly I realised "singing, painting/drawing". Dad made me sing half dozen songs. It was such a wonderful de stressing activity for both of us, infact to the whole family. Painting! I did not get a good tutor to fulfill that desire. I learned to do couple of art works which I still have at my parent's place.

After thinking much about hobby etc., I thought of re-living it. I started off singing one of my favorite songs, prayer to Lord Ganesha " Gajavadana beduve..gouri tanaya .." there came a voice asking "dear are you ok? .." (read it as are you upset?) and my son came running "what happened mummy..why are you singing?" ..
Post a Comment